ಅಸೈನ್ ಮೆಂಟ್(ಕಾರ್ಯನಿಯೋಜನೆ)-09.
“ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳುವುದು ಹೇಗೆ?”
“ ಮಕ್ಕಳು
ಸಹಜವಾಗಿ ಬೆಳೆಯುವ ಸಸಿಗಳಂತೆ ಅವರ ಲಾಲನೆ ಪಾಲನೆ ನೋಡಿಕೊಳ್ಳುವ ತೋಟದ ಮಾಲಿಗಳೇ ಶಿಕ್ಷಕರು ಅವರ ಪ್ರೇಮ,ಅಭಿಮಾನ
ವಾತ್ಸಲ್ಯ ಪ್ರೋತ್ಸಾಹಗಳಿಂದ ಮಕ್ಕಳು ಅಭಿವೃದ್ಧಿ ಹೊಂದುತ್ತಾರೆ”-ಸ್ವಾಮಿ ವಿವೇಕಾನಂದರ ವಾಣಿಯಂತೆ
ಶಿಕ್ಷಕ ಸಮಾಜದಲ್ಲಿ ಪವಿತ್ರ ಸ್ಥಾನ ಹೊಂದಿರುವುದರಿಂದ ಶಿಕ್ಷಣ ವ್ಯವಸ್ಥೆ ಬದಲಾದಂತೆ ನಾವು ಬೋಧಿಸುವ
ವಿಧಾನಗಳು ಕೂಡಾ ಬದಲಾಗಬೇಕು.
ಎಲ್ಲಾ ರಂಗಗಳಲ್ಲಿ
ತೀವ್ರವಾಗಿ ಬದಲಾವಣೆಯಾಗುತ್ತಿದೆ.ಶಿಕ್ಷಕ ಈ ಎಲ್ಲಾ ಬದಲಾವಣೆಗಳನ್ನು ಅರಿತು ಜ್ಞಾನವನ್ನು ಪಡೆಯುವುದರ
ಮೂಲಕ ಸಮಾಜದ ಉತ್ತಮ ಪ್ರಜ್ಞಾವಂತ ಪ್ರಜೆಗಳನ್ನು ರೂಪಿಸಬೇಕಾಗಿದೆ.ಶಿಕ್ಷಕ ನಿಂತ ನೀರಾಗದೇ ಕ್ರಿಯಾಶೀಲನಾಗಿರಬೇಕು.ಈಗಾಗಲೇ
ಸಾಕಷ್ಟು ಸಮಯಾವಕಾಶ ದೊರೆತಿರುವುದರಿಂದ ಅಮೂಲ್ಯ ವೇಳೆಯನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ತಂತ್ರಜ್ಞಾನಾಧರಿತ
ಶಿಕ್ಷಣವನ್ನು ಪಡೆಯುವುದರ ಮೂಲಕ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಬಹುದಾಗಿದೆ.
YOUTUBE,ದೀಕ್ಷಾ ಆ್ಯಪ್ ಮುಂತಾದವುಗಳಲ್ಲಿ
ವಿಷಯಕ್ಕೆ ಸಂಬಂಧಿಸಿದ ಸಾಕಷ್ಟು ವೀಡಿಯೋಗಳು ಇವೆ ಅವುಗಳನ್ನು ವೀಕ್ಷಿಸಿ ತಿಳಿದುಕೊಂಡರೆ ತರಗತಿಗಳಲ್ಲಿ
ವಿದ್ಯಾರ್ಥಿಗಳಿಗೆ ಸರಳವಾಗಿ ವಿಷಯವನ್ನು ಅರ್ಥೈಸಲು ಬರುತ್ತದೆ.ಶಾಲೆಯಲ್ಲಿ ಬೋಧನೆಯ ಸಮಯದಲ್ಲಿ ಮಕ್ಕಳಿಗೆ
ನೈಜ ಅನುಭವ ನೀಡಲು ದಿನಪತ್ರಿಕೆ,ವಾರಪತ್ರಿಕೆಗಲಲ್ಲಿ
ಬರುವ ಅಂಶಗಳನ್ನು ಪಟ್ಟಿ ಮಾಡಿ ತರಗತಿಗಳಲ್ಲಿ ಪ್ರದರ್ಶಿಸಬೇಕು. ಸಮಾಜವಿಜ್ಞಾನದ ಲ್ಯಾಬ್ ನ್ನು ತಯಾರಿಸಿ
ಅಲ್ಲಿ ಕಲಿಕೋಪಕರಣಗಳು ಸಂಗ್ರಹಿಸಬೇಕು.ಬೋಧಿಸುವ ವಿಷಯಕ್ಕೆ ಸಂಬಂಧಿಸಿದ ಹಲವಾರು ಲಭ್ಯ ಆಕರ ಗ್ರಂಥಗಳನ್ನು
ಓದುವುದರ ಮೂಲಕ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಬಹುದಾಗಿದೆ.
ನಮ್ಮ ವಿಷಯದ ಜಿಲ್ಲಾ ಮತ್ತು ರಾಜ್ಯ ಸಂಪನ್ಮೂಲ ವ್ಯಕ್ತಿಗಳನ್ನು
ದೂರವಾಣಿಯ ಮೂಲಕ ಸಂಪರ್ಕಿಸಿ ಬೋದನೆಯಲ್ಲಿ ಬರುವ ಕ್ಲಿಷ್ಟಕರವಾದ ಅಂಶಗಳನ್ನು ಚರ್ಚಿಸಿ ತಿಳಿದುಕೊಳ್ಳುವುದು.ಹಾಗೂ ವೃತ್ತಿಯಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಸಂಪರ್ಕಿಸಿ
ಅವರು ತಮ್ಮ ಬೋಧನೆಯಲ್ಲಿ ಅಳವಡಿಸಿಕೊಂಡ ಉತ್ತಮ ಅಂಶಗಳನ್ನು ನಮ್ಮ ಬೋಧನೆಯಲ್ಲಿ ಅಳವಡಿಸಿಕೊಳ್ಳುವುದರ
ಮೂಲಕ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳುವುದು. ಸಹದ್ಯೋಗಿಗಳೊಂದಿಗೆ ಅನೇಕ ವಿಷಯಗಳನ್ನು ಚರ್ಚಿಸುವುದರ
ಮೂಲಕ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳುವುದು.
ದಿನನಿತ್ಯದ
ಶಾಲಾ ಬೋಧನೆಯಲ್ಲಿ ಬಳಸುವ ಹಲವಾರು ಬೋಧನಾ ವಿಧಾನಗಳನ್ನು
ಇನ್ನೂ ಉತ್ತಮಪಡಿಸಿಕೊಳ್ಳಲು ಅವುಗಳ ಸತತ ಅಭ್ಯಾಸ ಮಾಡುವುಡರ ಮೂಲಕ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳುವುದು.ಕಳೆದ
ವರ್ಷದಲ್ಲಿ ನಡೆದ ಕಾರ್ಯಗಾರ ಮತ್ತು ಪುನ:ಶ್ಚೇತನ ಕಾರ್ಯಗಾರದ ವಿಷಯಗಳನ್ನು ಪುನರ ಮನನ ಮಾಡಿಕೊಳ್ಳುವುದು.
ವಿದ್ಯಾರ್ಥಿಗಳೊಂದಿಗೆ ನಿರಂತರ ಸಂವಾದದಿಂದ ಕಲಿಕಾ ಸಮಸ್ಯೆಗಳಿಗೆ ನಿರಂತರ ಹಿಮ್ಮಾಹಿತಿಯನ್ನು ನೀಡುವುದರ
ಮೂಲಕ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳುವುದು.
“ಶಿಕ್ಷಕನು ಶಿಕ್ಷಣವೆಂಬ ಹಡಗಿಗೆ ನಾವಿಕನಿದ್ದಂತೆ” ಆದ್ದರಿಂದ ಬೋದನೆ ಮತ್ತು ಕಲಿಕೆ ಪ್ರಕ್ರಿಯೆ
ಸುಗಮವಾಗಲು ಪ್ರತಿಯೊಬ್ಬರು ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಂಡು ಸಮಾಜದಲ್ಲಿ ಮುನ್ನಡೆಯಬೇಕು.
No comments:
Post a Comment